ಒಂದು ದಿನ, ನಮ್ಮ ಪುಟ್ಟ ಮಗ ತನಿಷ್, ಹಿತ್ತಲಿನ ಸೀಮೆ ಬದನೇಕಾಯಿ ಚಪ್ಪರದ ಕೆಳಗೆ ತೂಗುಯ್ಯಾಲೆಯಲ್ಲಿ, ತೂಗಿಸಿಕೊಳ್ಳುತ್ತ ಪರವಶನಾಗಿ ಅಲ್ಲೇ ನಿದ್ದೆ ಹೋದ. ನನ್ನ ಮಗ ಏನು ಅಂದುಕೊಂಡು ಮಲಗುತ್ತಾ ಇರಬಹುದು ಎಂದು ಕಲ್ಪನೆ ಮಾಡಿ, ಮೂಲ ಕೃತಿಯ್ನನು ಮಾರ್ಪಡಿಸಿ ಆ ಸಂದರ್ಭದಲ್ಲಿ ನಾನು ಗೀಚಿದ ಹಾಡು ಇದು. ನನ್ನ ಹೆಂಡತಿ ಶೋಭಾಳ ಸಂಬಂಧಿ ಶ್ರಾವ್ಯ ಸೊಗಸಾಗಿ ಹಾಡಿದ್ದಾಳೆ. ಕೇಳಿ ಆನಂದಿಸಿ.
ಗೀತ ರಚನೆ
ಪರವಶನಾದೆನು ತೂಗುವ ಮುನ್ನವೇ
ಆಟವ ಆಡಲಿ ಹೇಗೆ ನಿದ್ರೆಯ ಮುನ್ನವೇ
ಇದಕ್ಕಿಂತ ಬೇಗ ನೀನು ತೂಗಬಾರದಿತ್ತೇ ಅಪ್ಪ
ಇನ್ನಾದರೂ ಅಪ್ಪಿಕೋ ನನ್ನನು ನಿದ್ರೆಯ ಮುನ್ನವೇ
ಪರವಶನಾದೆನು ತೂಗುವ ಮುನ್ನವೇ
ಆಟವ ಆಡಲಿ ಹೇಗೆ ನಿದ್ರೆಯ ಮುನ್ನವೇ
ನಿನ್ನ ಕಣ್ಣಿಗಂತು ನಾನು ಭೀಮ ಯಾವಾಗಲು
ಇನ್ನು ಬೇರೆ ಏನು ಮಾಡಲಿ ಅಭಿಮನ್ಯುನಾಗಲು
ಹೂ ಅರಳುವ ಸದ್ದನು ನಿನ್ನ ನಗೆಯಲಿ ಕೇಳಬಲ್ಲೆ
ನನ್ನ ನಿದ್ದೆಯ ನೋಡು ನೀ ಈಗ ಕುಂತಲ್ಲೇ
ನಾನೇನೆ ಮುಗುಳ್ನಕ್ಕರೆನು ನಿನಗಿಂತ ಚೂಟಿ ನಾನು
ತುಟಿಯಲ್ಲಿಯೇ ಮುಚ್ಚಿಟ್ಟುಕೊ ಮುತ್ತೊಂದನು ಮಲಗುವ ಮುನ್ನವೇ
ಪರವಶನಾದೆನು ತೂಗುವ ಮುನ್ನವೇ
ಆಟವ ಆಡಲಿ ಹೇಗೆ ನಿದ್ರೆಯ ಮುನ್ನವೇ
ನಿದ್ದೆಯಲ್ಲಿ ತುಂಬ ಜಾರಿವೆನು ನಿನ್ನನು ಕೇಳದೇ
ನೀ ಕಟ್ಟಿದ ಸೊಗಸಾದ ತೂಗು ಉಯ್ಯಾಲೆಯಲಿ
ನನ್ನ ಗೊರಕೆ ಒಂದೊಂದೇ ಕೇಳಬೇಕು
ಆಲಿಸುವಾಗ ನೋಡು ನನ್ನನ್ನೆ ಸಾಕು
ಸಹವಾಸದೋಷದಿಂದ ಸರಿ ಹೋಗಬಹುದೇ ನಾನು
ನನಗಾಗಿಯೇ ಕಾದಿಟ್ಟುಕೊ ಹಾಲಿನ ಬಾಟಲಿ ಒಂದನು ಕೇಳುವ ಮುನ್ನವೇ
ಪರವಶನಾದೆನು ತೂಗುವ ಮುನ್ನವೇ
ಆಟವ ಆಡಲಿ ಹೇಗೆ ನಿದ್ರೆಯ ಮುನ್ನವೇ
YouTube Video
Overwhelming Response from friends and Family
- Very beautiful collection of babies pics and video’s. Song and Singer voice is melodious 👍 Super
- Maski..Multi Talented Personality... Keep Going.. Expecting Maski's Music Album soon.
- I can't agree more. Kalegaara maski 👍 Love the enthu n energy you carry Maski 👌👌
- Oh wow. Yenappa. Innu enen talent idhyappa ninge...amazing.
- Maski.. sooper agide song. Love the video snippets of chubby Tanish!!
- Super aagide Anil saahitya haagu haadugaarike..innu hechchu videos maadi share maadu
- That jokaali is so amazing! And what a lovely song as well 👌
- Super composition and nice singing, lots of love to chota bheem💪🏻🥰🥰
- Loved it Very well written 👌
- Wow so beautiful 😻 written 🎉🎊full of love and affection ❤️also nicely sung by Shravya 👍🎉Thanks for sharing
- Chindi Anil 👏👏👏👏👏👏 👍🎉🎊🎉🎊ಸೊಗಸಾದ ಗೀತೆ ರಚನೆ
- 👌🏻👌🏻👌🏻 How many more hidden talents you have sir😱👌🏻👏🏻🙏🏻.
- Sooper song and composition , Anil...baby Tanish is the real attraction😍
- Super singing and even super Tanish....👏👏👏. ನಿಮ್ಮ ಲಿರಿಕ್ಸ್ ಬಹಳ ಚೆನ್ನಾಗಿದೆ.
- ಸಕ್ಕತ್ ರಚನೆ ಮತ್ತು singing! 🔥
- Super Lyrics and video Maski 👌♥️
- Super se upar👌🏻👌🏻👌🏻👌🏻👌🏻👌🏻
- Wow too good le 👌🏼
- Wow. Super Maga!!!
No comments:
Post a Comment